ದರ್ಶನ್ ವೃತ್ತಿ ಬದುಕಿನಲ್ಲೇ 'ನವಗ್ರಹ' ಸಿನಿಮಾ ವಿಶೇಷವಾಗಿ ನಿಲ್ಲುತ್ತೆ. ಸುಮಾರು 16 ವರ್ಷಗಳ ಹಿಂದೇನೆ ಇಂತಹದ್ದೊಂದು ಕನ್ನಡ ಚಿತ್ರರಂಗದಲ್ಲಿ ಇಂತಹದ್ದೊಂದು ಪ್ರಯತ್ನಕ್ಕೆ ಮುಂದಾಗಿತ್ತು. ಕನ್ನಡ ಚಿತ್ರರಂಗದ ದಿಗ್ಗಜ ಖಳನಾಯಕರ ಮಕ್ಕಳನ್ನು ಇಟ್ಟುಕೊಂಡು ಸಿನಿಮಾ ಮಾಡಲಾಗಿತ್ತು. ಈ ಪ್ರಯತ್ನಕ್ಕೆ ಕನ್ನಡಿಗರು ಕೂಡ ಮನಸೋತಿದ್ದರು.
ಇದೇ ಸಿನಿಮಾ ಈಗ 16 ವರ್ಷಗಳ ಬಳಿಕ ಮತ್ತೆ ಮರು ಬಿಡುಗಡೆಯಾಗುತ್ತಿದೆ. ಕಳೆದ ಒಂದು ವಾರದಿಂದಲೇ ದರ್ಶನ್ ಫ್ಯಾನ್ಸ್ ಸೆಲೆಬ್ರೆಷನ್ ಮಾಡುತ್ತಿದ್ದಾರೆ. ಇಂದು ಅದ್ಧೂರಿಯಾಗಿ ರೀ- ರಿಲೀಸ್ ಆಗಿರುವ ಈ ಸಿನಿಮಾಗೆ ಥಿಯೇಟರ್‌ಗಳಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ. ತೆರೆಮೇಲೆ ಮತ್ತೆ ದರ್ಶನ್ ನೋಡಿ ಫ್ಯಾನ್ಸ್ ಆರ್ಭಟಿಸುತ್ತಿದ್ದಾರೆ.